Buyyanadoddi fish thawa fry
ಬುಯ್ಯನದೊಡ್ಡಿ ಫಿಶ್ ತವಾ ಫ್ರೈ ಹೆಸರಲ್ಲಿ ಇರುವ ಹಾಗೆ ‘ ದ ಫೇಮಸ್ ಬುಯ್ಯನದೊಡ್ಡಿ ಫಿಶ್ ತವಾ ಫ್ರೈ’ ಸಿಗುವುದು ಬುಯ್ಯನ ದೊಡ್ಡಿ ಎಂಬ ಗ್ರಾಮದಲ್ಲಿ.
ಈ ಗ್ರಾಮವು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿಯ ಶಿಂಷಾ ನದಿಯ ಪಕ್ಕದಲ್ಲಿ ಬರುತ್ತದೆ.
ಈ ಗ್ರಾಮವು ಹಲಗೂರಿನಿಂದ 6 ಕಿಲೋಮೀಟರ್ ದೂರದಲ್ಲಿದೆ. ವಾರದಲ್ಲಿ ಸೋಮವಾರದ ದಿನ ಹೊರತುಪಡಿಸಿ ಎಲ್ಲಾ ದಿನವೂ ಇಲ್ಲಿ ಫಿಶ್ ತವಾ ಫ್ರೈ ಸಿಗುತ್ತದೆ.
ಬೇರೆಡೆಗೆ ಹೋಲಿಸಿದರೆ ಇಲ್ಲಿ ಫಿಶ್ ತವಾ ಫ್ರೈ ತುಂಬಾ ಸ್ಪೆಷಲ್ ಯಾಕೆಂದರೆ, Because ಇಲ್ಲೇ ಸಮೀಪದ ಹೊಳೆಯಲ್ಲಿ ಹಿಡಿದ ತಾಜಾ ತಾಜಾ ಮೀನುಗಳನ್ನು ಬಳಸಲಾಗುತ್ತದೆ ಹಾಗೂ ಇಲ್ಲಿಯ ಜನರು ತಾವೇ ಮನೆಯಲ್ಲಿ ತಯಾರಿಸಿದ ಮಸಾಲವನ್ನು ಬಳಸಿ ತವಾ ಫ್ರೈ ಮಾಡುತ್ತಾರೆ.
ಯಾವುದೇ ರೀತಿಯ ಬಣ್ಣಕ್ಕೆ ಆಗಲಿ ಟೇಸ್ಟ್ ಆಗಲಿ ಕೆಮಿಕಲ್ಸ್ ಪೌಡರ್ ಅನ್ನು ಬಳಸುವುದಿಲ್ಲ. So ಆದ್ದರಿಂದ ಈ ಜಾಗವು ತುಂಬಾ ಫೇಮಸ್ ಆಗಿದೆ.
ಈ ಜಾಗದಲ್ಲಿ ಯಾವತ್ತೂ ಹಳೆಯ ಸ್ಟಾಕ್ ಎಂಬ ಮಾತೆ ಬರುವುದಿಲ್ಲ ಯಾಕೆಂದರೆ ಇಲ್ಲಿ ಪ್ರತಿದಿನವೂ ಫಿಶ್ ತವಾ ಫ್ರೈ Shortage ಆಗುತ್ತದೆ.
ಅಷ್ಟು ಫೇಮಸ್ ಮತ್ತು ಅಷ್ಟು ಜನ ಇರುತ್ತಾರೆ. ವ್ಯಾಪಾರಿಗಳು ಕೂಡ ಅತಿಯಾದ ಲಾಭದ ಆಸೆ ಪಡದೆ ಈ ಜಾಗದ, ಈ ಟೇಸ್ಟಿ ಫುಡ್ ನ ಕ್ವಾಲಿಟಿಯನ್ನು ಕಾಪಾಡುತ್ತಾ ಬಂದಿದ್ದಾರೆ.
ಬೆಂಗಳೂರಿನಿಂದ ಲಾಂಗ್ ಡ್ರೈವ್ ಎಂದು ಹೇಳಿ ತವಾ ಫ್ರೈ ಯನ್ನು ಸವಿಯಲು ಬರುವ ಸಂಖ್ಯೆ ಬಹಳಷ್ಟಿದೆ.

Buyyanadoddi fish thawa fry ಫಿಶ್ ತವಾ ಫ್ರೈ ತುಂಬಾ ಟೇಸ್ಟಿ ಆಗಿರಲು ಕಾರಣಗಳು?
ಬುಯ್ಯನ ದೊಡ್ಡಿ ಗ್ರಾಮದ ಪಕ್ಕದಲ್ಲಿಯೇ ಶಿಂಷಾ ನದಿಯ ಹೊಳೆ ಹರಿಯುತ್ತದೆ. ಪ್ರತಿದಿನ ವ್ಯಾಪಾರಿಗಳು ಇಲ್ಲಿಂದಲೇ ತಾಜಾ ತಾಜಾ ಮೀನುಗಳನ್ನು ತೆಗೆದುಕೊಳ್ಳುತ್ತಾರೆ.
ಒಂದು ದಿನಕ್ಕೆ ಎಷ್ಟು ಬೇಕು ಅಷ್ಟೇ ಮೀನುಗಳನ್ನು ಇವರು ಖರೀದಿಸುತ್ತಾರೆ. ಯಾಕೆಂದರೆ ಇಲ್ಲಿ ಮೀನಿನ ಅಭಾವ ಇರುವುದಿಲ್ಲ ಸ್ಟಾಕ್ ಮಾಡಬೇಕೆಂಬ ಅವಶ್ಯಕತೆಯೂ ಇಲ್ಲ.
ಇಲ್ಲಿ ಹೆಚ್ಚಾಗಿ ಜಿಲೇಬಿ ಮೀನುಗಳನ್ನು ತವಾ ಫ್ರೈ ಮಾಡಲು ಬಳಸುತ್ತಾರೆ.
ಮೀನು ರುಚಿಯಾಗಿರಲು ಇನ್ನೊಂದು ಪ್ರಮುಖ ಕಾರಣವೆಂದರೆ ಇಲ್ಲಿಯ ಜನರು ಯಾವುದೇ ರೀತಿಯ ಅಂಗಡಿಯ ಅಥವಾ ಕೆಮಿಕಲ್ ಪೌಡರ್ ಅನ್ನು ಬಳಸದೆ ತಾವೇ ಮನೆಯಲ್ಲಿ ತಯಾರಿಸಿದ ಮಸಾಲವನ್ನು ಬಳಸಿ ಬಿಸಿ ಬಿಸಿ ತವಾ ಫ್ರೈ ಮಾಡಿಕೊಡುತ್ತಾರೆ So ಹಾಗಾಗಿ ಟೇಸ್ಟ್ ದುಪ್ಪಟ್ಟ ಗೊಳ್ಳುತ್ತದೆ.
ಒಂದು ದಿನದ ಅಥವಾ ವಾರಂತ್ಯದ ಪ್ರವಾಸಕ್ಕೆಂದು ಕನಕಪುರ, ಮುತ್ತತ್ತಿ, ಮಳವಳ್ಳಿ ಸಮೀಪದ ಗಗನಚುಕ್ಕಿ ಬರಚುಕ್ಕಿ, ತಲಕಾಡು ಹಾಗೂ ಮೈಸೂರಿನ ಕಡೆ ಬರುವ ಜನರು ಇಲ್ಲಿಗೆ ತಪ್ಪದೆ ಬಂದು ಹೋಗುತ್ತಾರೆ.
ಬುಯ್ಯನ ದೊಡ್ಡಿಯಲ್ಲಿ ಮೊದಲು ಒಂದು ಅಂಗಡಿಯಿಂದ ಶುರುವಾದ ಫಿಶ್ ತವಾ ಫ್ರೈ ಈಗ ಸುಮಾರು 10-15 ಅಂಗಡಿಗಳವರೆಗೆ ವಿಸ್ತರಿಸಿದೆ ಆದರೆ ಯಾರು ಸಹ ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದೆ ಉತ್ತಮವಾದ ಟೇಸ್ಟಿ ತವಾ ಫ್ರೈ ಕೊಡುತ್ತಾ ಬಂದಿದ್ದಾರೆ.

Buyyanadoddi fish ತವಾ ಫ್ರೈ ಸಿಗುವ ಸಮಯ
ವಾರದಲ್ಲಿ ಸೋಮವಾರ ಹೊರತುಪಡಿಸಿ ಎಲ್ಲಾ ದಿನವೂ ಸಹ ತವಾ ಫ್ರೈ ಸಿಗುತ್ತದೆ.
ಇನ್ನೊಂದು ಮುಖ್ಯ ವಿಚಾರ ಇಲ್ಲಿ ತವಾ ಫ್ರೈ ಒಂದೇ ಹೆಚ್ಚಾಗಿ ಸಿಗುತ್ತದೆ ಫಿಶ್ ಕಬಾಬ್ ಆಗಲಿ ಅಥವಾ ಇನ್ನಿತರ ಯಾವುದೇ ನಾನ್ವೆಜ್ ಊಟ ಅಷ್ಟಾಗಿ ಸಿಗುವುದಿಲ್ಲ.
ಇಲ್ಲಿ ಮಧ್ಯಾಹ್ನ 12 ಗಂಟೆಯಿಂದ ಶುರುವಾಗಿ ಸಂಜೆ 7 ಅಥವಾ 8 ಗಂಟೆಯವರೆಗೆ ಫಿಶ್ ತವಾ ಫ್ರೈ ಸಿಗುತ್ತದೆ. But ವೀಕೆಂಡ್ ಗಳಲ್ಲಿ ಬೇಗನೆ ಕಾಲಿಯಾಗುವ ಸಂಭವ ಜಾಸ್ತಿ ಇರುತ್ತದೆ.
More details : https://sunraysinfo.in/basavana-betta
ಹತ್ತಿರದ ಸಿಟಿಗಳಿಂದ ಬುಯ್ಯನ ದೊಡ್ಡಿಗೆ ಇರುವ ದೂರ :
ಹಲಗೂರು – 5 ಕಿಲೋಮೀಟರ್
ಮಳವಳ್ಳಿ – 25 ಕಿಲೋಮೀಟರ್
ಕನಕಪುರ – 32 ಕಿಲೋಮೀಟರ್
ಚನ್ನಪಟ್ಟಣ – 25 ಕಿಲೋ ಮೀಟರ್
ರಾಮನಗರ – 37 ಕಿಲೋಮೀಟರ್
ಬೆಂಗಳೂರು – 92 ಕಿಲೋಮೀಟರ್
ಮೈಸೂರು – 73 ಕಿಲೋಮೀಟರ್