Basavanabetta Halagur
Basavanabetta Halagur ಬಸವನ ಬೆಟ್ಟ – ಶ್ರೀ ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನ
ಹೆಬ್ಬೆಟ್ಟ ಅಥವಾ ಬಸವನ ಬೆಟ್ಟ ಎಂದು ಖ್ಯಾತಿ ಪಡೆದಿರುವ ಈ ಪ್ರಾಚೀನ ದೇವಾಲಯವು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿ ಬಸವನಹಳ್ಳಿ ಗ್ರಾಮದ ಬಳಿ ಕಂಡುಬರುತ್ತದೆ.
ಈ ದೇವಾಲಯ ತಲುಪಲು ಹಲಗೂರಿನಿಂದ ಕಾಡಿನ ಮಧ್ಯೆ ಹಚ್ಚು ಕಟ್ಟಾದ ತಾರ್ ರಸ್ತೆಯ ವ್ಯವಸ್ಥೆ ಇದೆ. ಈ ಪ್ರದೇಶವು ಬಸವನ ಬೆಟ್ಟ ಫಾರೆಸ್ಟ್ ಏರಿಯಕ್ಕೆ ಸೇರುತ್ತದೆ.
ಕಾಡಿನ ಮಧ್ಯೆ ಹಕ್ಕಿಗಳ ಕಲರವ, ಕಾಡಾನೆಗಳು, ಆಗಾಗ ಕೇಳಿಸುವ ಪ್ರಾಣಿಗಳ ಸದ್ದು, ಇವೆಲ್ಲದರ ನಡುವೆ ದೇವಾಲಯವನ್ನು ತಲುಪುವ ದಾರಿ ಹಚ್ಚ ಹಸಿರಿನಿಂದ ಕೂಡಿದ ಘಾಟ್ ರಸ್ತೆಯಾಗಿದ್ದು, ಮನಮೋಹಕವಾಗಿದೆ.

ಮಳೆಗಾಲದಲ್ಲಂತೂ ಇದನ್ನು ಮಡಿಕೇರಿಯ ಚೆಲುವಿಗೆ ಹೋಲಿಸಬಹುದು. ಆಗಾಗ ಸುಂದರ ವ್ಯೂ ಪಾಯಿಂಟ್ ಗಳು ಸಹ ಸಿಗುತ್ತದೆ. ಎತ್ತರದಿಂದ ಹಲಗೂರು, ಕಬ್ಬಾಳು, ಮುತ್ತತ್ತಿ ಹಾಗೂ ಇನ್ನಿತರ ಬೆಟ್ಟಗಳ ಪರ್ವತ ಶ್ರೇಣಿಗಳನ್ನು ಕಣ್ಣು ತುಂಬಿ ಕೊಳ್ಳಬಹುದು.
ರಸ್ತೆಯ ಮಧ್ಯೆ ಅಲ್ಲಲ್ಲಿ ಆನೆಗಳ ಲದ್ದಿಗಳು ಕಾಣಸಿಗುತ್ತವೆ, ಇದರಿಂದ ಇಲ್ಲಿ ಕಾಡಾನೆ ಗಳ ಓಡಾಟ ಜೋರು ಎಂದು ಕಂಡು ಬರುತ್ತದೆ.
ಹೆಬ್ಬೆಟ್ಟದ ಶ್ರೀ ಬಸವೇಶ್ವರ ದೇವಾಲಯ
ಈ ದೇವಸ್ಥಾನವು ಕ್ರಿಸ್ತಶಕ 570 – 650ರ ಅವಧಿಯಲ್ಲಿ ಪ್ರಥಮ ಚೋಳರು ನಿರ್ಮಿಸಿರಬಹುದೆಂದು ದೇವಸ್ಥಾನಗಳ ಪ್ರಾಚ್ಯ ಸಂಶೋಧಕರಿಂದ ಉಲ್ಲೇಖಿಸಲ್ಪಟ್ಟಿದೆ.
Basavanabetta Halagur ಬಸವನ ಬೆಟ್ಟ, ಹೆಬ್ಬೆಟ್ಟದ ಶ್ರೀ ಬಸವೇಶ್ವರ ದೇವಾಲಯದ ಮೂಲ ವಿಗ್ರಹವು ಏಕಶಿಲೆಯಿಂದ ನಿರ್ಮಿಸಲ್ಪಟ್ಟಿದೆ.
ತಳಹದಿ ಪೀಠ ಲಿಂಗ ಎಲ್ಲವೂ ಒಂದೇ ಕಲ್ಲಿನಿಂದ ಒಂದೇ ಬಂಡೆಯಿಂದ ಕೆತ್ತಲಾಗಿದೆ. ಈ ಬಂಡೆಯ ಮೇಲೆಯೇ ದೇವಸ್ಥಾನ ನಿರ್ಮಾಣವಾಗಿದೆ.

ದೇವಸ್ಥಾನದ ಗರ್ಭಗುಡಿ ಅರ್ಧ ಮಂಟಪ ಮಹಾಮಂಟಪಗಳು ಪ್ರಥಮ ಚೋಳರ ಶೈಲಿಯಲ್ಲಿಯೇ ನಿರ್ಮಾಣವಾಗಿರುವುದು ಕಂಡು ಬರುತ್ತದೆ.
ಪ್ರಥಮ ಚೋಳರು 1400 ವರ್ಷಗಳ ಹಿಂದೆಯೇ ನಿರ್ಮಿಸಿದ ಶ್ರೀ ಹೆಬ್ಬೆಟ್ಟದ ಬಸವೇಶ್ವರ ದೇವಾಲಯ ಶೈಲಿ ವಿನ್ಯಾಸಗಳ ಪ್ರಕಾರವೇ ಮಹಾದ್ವಾರವನ್ನು ನಿರ್ಮಿಸಲಾಗಿದೆ.
ಶ್ರೀ ನಂದಿಕೇಶ್ವರನನ್ನು ಮೂಡಣ ದಿಕ್ಕಿನಲ್ಲಿ ಈಶಾನ್ಯವನ್ನು ನೋಡುತ್ತಿರುವ ಹಾಗೆ ಚೋಳರ ಶೈಲಿಯಲ್ಲಿಯೇ 2006 ನೇ ಇಸವಿಯಲ್ಲಿ ನಂದಿ ವಿಗ್ರಹವನ್ನು ನಿರ್ಮಿಸಲಾಗಿದೆ.
ದೇವಸ್ಥಾನದ ಮುಂಭಾಗದಲ್ಲಿ ಒಂದು ಕೊಳವಿದ್ದು ಎತ್ತರದ ಮರಗಳು ಸುತ್ತ ಕಂಡು ಬರುತ್ತದೆ. ಸುತ್ತಮುತ್ತಲ ಊರಿನವರು ಶ್ರೀಹೆಬ್ಬಟ್ಟದ ಬಸವೇಶ್ವರ ದೇವರಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ.
ಯುಗಾದಿ ಹಬ್ಬದ ದಿನದಂದು ಇಲ್ಲಿಗೆ ಬಂದು ಅನ್ನಸಂತರ್ಪಣೆ ಕಾರ್ಯಗಳನ್ನು ಮಾಡುತ್ತಾರೆ.

Basavanabetta Halagur ಬಸವನ ಬೆಟ್ಟ ತಲುಪುವ ರೀತಿ How to reach ?
ಮಳವಳ್ಳಿ ಮತ್ತು ಹಲಗೂರಿನಿಂದ KSRTC ಬಸ್ ಸಾರಿಗೆ ವ್ಯವಸ್ಥೆ ಇದ್ದು, ಆದರೆ ಇದು ಟೈಮಿಂಗ್ಸ್ ಗೆ ಒಳಪಟ್ಟಿದೆ.
ಹಲಗೂರಿನಿಂದ ಬಸವನಹಳ್ಳಿ ರೂಟ್ನಲ್ಲಿ ಸ್ವಂತ ಬೈಕ್ , ಕಾರ್ ಅಥವಾ ಇನ್ನಿತರ ವ್ಯವಸ್ಥೆಗಳ ಮೂಲಕ ಬಸವನ ಬೆಟ್ಟವನ್ನು ತಲುಪಬಹುದು.
ಕಾಡಾನೆಗಳ ಓಡಾಟ ಹೆಚ್ಚಾಗಿ ಕಂಡುಬರುವುದರಿಂದ ರಸ್ತೆಯ ಮಧ್ಯೆ ಅಲ್ಲಲ್ಲಿ ಕಾರ್ ಅಥವಾ ಬೈಕ್ ಅನ್ನು ನಿಲ್ಲಿಸುವುದು ತುಂಬಾ ಅಪಾಯಕಾರಿ.
ಬಸವನ ಬೆಟ್ಟಕ್ಕೆ ಹತ್ತಿರದ ನಗರಗಳಿಂದ ಇಷ್ಟು ದೂರ
ಹಲಗೂರು – 10 ಕಿಲೋಮೀಟರ್
ಮಳವಳ್ಳಿ – 31 ಕಿಲೋಮೀಟರ್
ಸಾತನೂರು – 18 ಕಿಲೋಮೀಟರ್
ಕನಕಪುರ – 35 ಕಿಲೋಮೀಟರ್
ಚನ್ನಪಟ್ಟಣ – 36 ಕಿಲೋಮೀಟರ್
ರಾಮನಗರ – 48 ಕಿಲೋಮೀಟರ್
ಬೆಂಗಳೂರು – 90 ಕಿಲೋಮೀಟರ್
ಮೈಸೂರು – 80 ಕಿಲೋಮೀಟರ್

ಹೆಬ್ಬೆಟ್ಟದ ಶ್ರೀ ಬಸವೇಶ್ವರ ದೇವಾಲಯದ ಹತ್ತಿರವಿರುವ ಪ್ರಸಿದ್ಧ ಪ್ರವಾಸಿ ತಾಣಗಳು
- ಮುತ್ತತ್ತಿ : ಮುತ್ತತ್ತಿರಾಯ ಆಂಜನೇಯ ಸ್ವಾಮಿ ದೇವಾಲಯದ ಸ್ಥಳವಾಗಿದ್ದು ಇದು ಕಾವೇರಿ ನದಿಯ ದಡದಲ್ಲಿದೆ. ಇದು ಮುತ್ತತ್ತಿ ಫಾರೆಸ್ಟ್ ಏರಿಯಾ ಕೆ ಒಳಪಡುತ್ತದೆ. ಹಲಗೂರಿನಿಂದ 19 ಕಿಲೋಮೀಟರ್ ದೂರದಲ್ಲಿದೆ. ಹಾಗೂ ಸಾತನೂರು ಇಂದ 28 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ಸ್ವಂತ ಬೈಕ್, ಕಾರ್ ಅಥವಾ ಟಿಟಿಗಳಲ್ಲಿ ತಲುಪಬಹುದು. ಬಸ್ ವ್ಯವಸ್ಥೆಯಿದ್ದು ಅದು ಟೈಮಿಂಗ್ಸ್ಗೆ ಒಳಪಟ್ಟಿರುತ್ತದೆ. ಹಚ್ಚಹಸುರಿನ ಘಾಟ್ ರಸ್ತೆಯ ಮೂಲಕ ಸಾಗುವ ದಾರಿಯು ಮನಮೋಹಕವಾಗಿದ್ದು ರಸ್ತೆಯ ಅಕ್ಕಪಕ್ಕದ ಅರಣ್ಯ ಭಾಗದಲ್ಲಿ ಜಿಂಕೆಗಳು, ಕಾಡಾನೆಗಳು, ಕಾಡು ಮಂಗಗಳು ,ಕಾಡು ಹಂದಿ ,ಸಾರಂಗಗಳು ಹಾಗೂ ಇನ್ನಿತರ ಪ್ರಾಣಿಗಳು ಕಂಡುಬರುತ್ತವೆ. ಅಲ್ಲಲ್ಲಿ ಕಾವೇರಿ ನದಿಯ ಸುಂದರ ವ್ಯೂ ಪಾಯಿಂಟ್ಗಳು ಸಹ ಕಂಡುಬರುತ್ತವೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ನದಿಯ ದಡದಲ್ಲಿ ನಾವೇ ಸ್ವತಹ ಅಡುಗೆ ಮಾಡಿಕೊಂಡು ನೀರಿನಲ್ಲಿ ಆಟವಾಡುತ್ತಾ, ಈಜಾಡುತ್ತಾ ಸಮಯವನ್ನು ಕಳೆಯಬಹುದು. ಇದು ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಪಿಕ್ನಿಕ್ ಮಾಡಲು ಅತ್ಯುತ್ತಮ ಸ್ಥಳವಾಗಿದೆ.
- ಬುಯ್ಯನ ದೊಡ್ಡಿ ಫಿಶ್ ತವಾ ಫ್ರೈ : ಬಸವನ ಬೆಟ್ಟ ಅಥವಾ ಮುತ್ತತ್ತಿಗೆ ಭೇಟಿ ನೀಡಿದ ನಂತರ ಮಧ್ಯಾಹ್ನದ ವೇಳೆಯಿಂದ ಸಂಜೆಯ ತನಕ ಸಮಯವಿದ್ದರೆ ನೀವು ಮಿಸ್ ಮಾಡದೆ ಹೋಗಲೇಬೇಕಾದ ಇನ್ನೊಂದು ಜಾಗವೇ ಬುಯ್ಯನ ದೊಡ್ಡಿ. ಹಲಗೂರಿನಿಂದ 5 km ದೂರದಲ್ಲಿದೆ.ಈ ಊರಿನ ಸಮೀಪವೇ ಶಿಂಷಾ ನದಿ ಅಥವಾ ಹೊಳೆ ಹರಿಯುವುದರಿಂದ ಅಲ್ಲಿ ತಾಜಾ ತಾಜಾ ಮೀನುಗಳು ಸಿಗುವುದರಿಂದ, ಈ ಊರಿನವರು ತಾವೇ ತಯಾರಿಸಿದ ಮಸಾಲ ಬಳಸಿ ಫಿಶ್ ತವಾ ಫ್ರೈ ಮಾಡುತ್ತಾರೆ. ಆದ್ದರಿಂದ ಇಲ್ಲಿ ಸಿಗುವ ಫಿಶ್ ತವಾ ಫ್ರೈ ಅತ್ಯಂತ ರುಚಿಕರವಾಗಿರುತ್ತದೆ. ಇಲ್ಲಿಗೆ ಬೆಂಗಳೂರಿನಿಂದ ಲಾಂಗ್ ಡ್ರೈವ್ ಬಂದು ಬುಯ್ಯನದೊಡ್ಡಿ ಫಿಶ್ ತವ ಫ್ರೈ ಸವಿಯಲು ಸಾಕಷ್ಟು ಜನ ಬರುತ್ತಾರೆ. ಇತ್ತೀಚಿಗೆ ಅದೇ ಊರಿನಲ್ಲಿ ಅದೇ ರೋಡಿನಲ್ಲಿ ಸಾಕಷ್ಟು ಫಿಶ್ ತವಾ ಫ್ರೈ ಅಂಗಡಿಗಳು ತೆರೆದುಕೊಂಡಿದ್ದು ಎಲ್ಲಾ ಕಡೆಯೂ ಅತ್ಯುತ್ತಮ ತವಾ ಫ್ರೈ ಸಿಗುತ್ತದೆ. Location : https://maps.app.goo.gl/gComHvM4QjjLguEG7
- ಗಗನಚುಕ್ಕಿ ಮತ್ತು ಬರಚುಕ್ಕಿ ಜಲಪಾತ : ಗಗನಚುಕ್ಕಿ ಮತ್ತು ಬರಚುಕ್ಕಿ ಜಲಪಾತಗಳು ಕಾವೇರಿ ನದಿಯಿಂದ ನಿರ್ಮಿತವಾದ ಜಲಪಾತಗಳಾಗಿವೆ. ಮಳವಳ್ಳಿಯಿಂದ 22km ದೂರದಲ್ಲಿದೆ. ಎತ್ತರದಿಂದ ಬೋರ್ಗೆರೆಯುತ್ತ ದುಮ್ಮಿಕ್ಕುವ ಕಾವೇರಿ ತಾಯಿಯನ್ನು ನೋಡುವ ಸೊಬಗು ತುಂಬಾ ಮನೋಹರವಾಗಿರುತ್ತದೆ. ಇಲ್ಲಿಯೂ ಸಹ ಫಿಶ್ ತವಾ ಫ್ರೈ ಮೀನು ಊಟ ಇತ್ಯಾದಿ ದೊರೆಯುತ್ತದೆ.


More Details : https://youtu.be/TCEjYOf-9PY?si=XrMLYR3NOgz4jnEt
Thank you for the information,very nice places to visit near Malavalli, help full😊
Thank you 😊
Great bro. Nice place ♥️
Nice place ♥️